Thursday, 25 September 2014

ಯಶಸ್ವಿ ಮಂಗಳಯಾನದ ಇಸ್ರೋ ವಿಜ್ಞಾನಿಗಳಿಗೆ ಸಲ್ಯೂಟ್

ಯಶಸ್ವಿ ಮಂಗಳಯಾನದ ಇಸ್ರೋ ವಿಜ್ಞಾನಿಗಳಿಗೆ ಸಲ್ಯೂಟ್- ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮತ್ತು ಜಾನಪದ ತಜ್ಞ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಾದ ಡಾ. ರಾಮೂ ಮೂಲಗಿ, ಶ್ರೀ.ಜಿ.ಎಲ್.ಸತ್ತೇನ್ನವರ-ಉಪಾದ್ಯಕ್ಷಕರು ಕ.ಪ್ರಾ.ಶಾ.ಶಿ.ಸಂಘ ಹುಬ್ಬಳ್ಳಿ ಘಟಕ , ಶ್ರೀ.ಸಿದ್ದು ಹಿರೇಮಠ-ಸದ್ಯಸರು ಕ.ಸ.ನೌ.ಸಂ ಹುಬ್ಬಳ್ಳಿ ಘಟಕ, ಶ್ರೀ.ಎಸ್.ಎಮ.ಮಡಿವಾಳರ, ಶ್ರೀ.ಎಸ್.ಎಂ.ಪೂಜಾರ ಹಾಗೂ ಶ್ರೀ.ಈರಣ್ಣ ಕಾಂಬಳೆ


ಹುಬ್ಬಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೈರಿದೇವರಕೊಪ್ಪದಲ್ಲಿ ಇಂದು ಮಂಗಳಯಾನದ ಅದ್ಭುತ ಯಶಸ್ಸಿನ ಶುಭ ಸಂದರ್ಭದವನ್ನು ಇಸ್ರೋ ವಿಜ್ಞಾನಿಗಳಿಗೆ ಸಲ್ಯೂಟ್ ನೀಡುವುದರ ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು.
“ಭಾರತವು ಇಂದು ತಂತ್ರಜ್ಞಾನ ಮಂಚೂಣಿಯಲ್ಲಿದೆ ಎಂಬುದನ್ನು ಈ ರಾಕೇಟ್ ಉಡ್ಡಯನದ ಮೂಲಕ ತೋರಿಸಲಾಗಿದೆ. ಪ್ರಥಮವಾಗಿ ಪ್ರಪಂಚದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ತಯಾರಿಸಲಾದ ಹಾಗೂ  ಮೊದಲ ಯತ್ನದಲ್ಲಿ ಮಂಗಳವನ್ನು ತಲುಪಿದ ಖ್ಯಾತಿ ಇಸ್ರೋ ವಿಜ್ಞಾನಿಗಳ ಪಾಲಿಗೆ ಲಭಿಸಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆ ಇಡೀ ವಿಶ್ವಕ್ಕೆ ಬೆರಗು ಮೂಡಿಸಿದೆ. ತಂತ್ರಜ್ಞಾನದಲ್ಲಿ ಅತೀ ಮುಂದಿರುವ ದೇಶಗಳು ಈ ಪ್ರಯತ್ನವನ್ನು ಮನಸಾರಿ ಮೆಚ್ಚಿ ಕೊಂಡಾಡಿದ್ದಾರೆ. ಪ್ರಪಂಚದ ಶ್ರೇಷ್ಟ ವಿಜ್ಞಾನಿಗಳು ನೀಡಿದ ರಾಷ್ಟ್ರ ನಮ್ಮ ಭಾರತ ದೇಶವಾಗಿದೆ, ಅಂತಹ ದೇಶದಲ್ಲಿ ಜನಿಸಿದ ನಾವು ಧನ್ಯರು, ಪುಣ್ಯವಂತರು . ಮಕ್ಕಳು ಈ ಖ್ಯಾತ ವಿಜ್ಞಾನಿಗಳ ಸಾಧನೆಯನ್ನು ಅನುಸರಿಸಬೇಕು ಮುಂದೇ ವಿಜ್ಞಾನಿಗಳಾಗಬೇಕು ಆ ನಿಟ್ಟಿನಲ್ಲಿ ನಿಮ್ಮಲ್ಲಿ ವೈಜ್ಞಾನಿಕ ಜಾಗೃತವಾಗಲಿ ನಿಮಗೆಲ್ಲರಿಗೂ ಇದು ಸ್ಪೂರ್ಥಿಯಾಗಲಿ” ಎಂದು  ವಿಜ್ಞಾನ ಶಿಕ್ಷಕರಾದ ಶ್ರೀ ಈರಣ್ಣ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳಿಂದ ಈ ಸಂದರ್ಭದಲ್ಲಿ ರಾಕೇಟಿನ ಮಾದರಿಯನ್ನು ಸಿದ್ದಪಡಿಲಾಗಿತ್ತು. ರಾಕೇಟನ ಮಾದರಿಯ ಮುಂದೆ ಎಲ್ಲರೂ ನಿಂತು ಗ್ರಾಂಡ್ ಸಲ್ಯೂಟನ್ನು ನೀಡಲಾಯಿತು.ಈ ರೀತಿಯಾಗಿ ವಿಭಿನ್ನ ರೀತಿಯಲ್ಲಿ  ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಭಾರತದ ಶ್ರೇಷ್ಟ ಸಾಧನೆಯನ್ನು ಗೌರವಿಸಲಾಯಿತು. “ಮಾಮ್ ತುಜೇ ಸಲಾಂ” ,”ಇಸ್ರೋ ವಿಜ್ಞಾನಿಗಳೇ ನಿಮಗೊಂದು ಸಲಾಂ”, “we proud of you ISRO Scientist”, “ಯಶಸ್ವಿ ಮಂಗಳಯಾನದ-ರೂವಾರಿಗೇ ನಿಮಗೆ ನಮ್ಮ ಶುಭಾಯಗಳು” ಎಂಬ ಮುಂತಾದ ಘೋಷಣೆಗಳನ್ನು ಕೂಗಲಾಯಿತು. ಎಲ್ಲ ಮಕ್ಕಳ ಜೋರಾಗಿ ಚಪ್ಪಾಳೆ ತಟ್ಟುವುದರ ಮೂಲಕ ಈ ಸಂದರ್ಭಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ.ಎಸ್.ಎ.ಅಂಗಡಿ ಪ್ರಧಾನಗುರುಮಾತೆಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಪದ ತಜ್ಞ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ.ರಾಮೂ ಮೂಲಗಿ, ಕ.ಪ್ರಾ.ಶಾ.ಶಿ.ಸಂಘ ಹುಬ್ಬಳ್ಳಿಯ ಉಪಾಧ್ಯಕ್ಷರಾದ ಶ್ರೀ.ಜಿ.ಎಲ್.ಸತ್ತೇನ್ನವರ , ಕ.ಸ.ನೌ.ಸಂಘ ಹುಬ್ಬಳ್ಳಿ ಸದಸ್ಯರಾದ ಶ್ರೀ.ಸಿದ್ದು ಹಿರೇಮಠ ಭಾಗವಹಿಸಿದ್ದರು. ಶಿಕ್ಷಕರಾದ ಶ್ರೀ.ಈರಣ್ಣ ಕಾಂಬಳೆ-ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ.ಎಸ್.ಎಂ.ಪೂಜಾರ ಕಾರ್ಯಕ್ರಮ ನಿರೂಪಿಸಿದರು, ಶ್ರೀ.ಸಿದ್ದು ಮಡಿವಾಳರ ಸ್ವಾಗತಿಸಿದರು , ಶ್ರೀಮತಿ.ಎಸ್.ಜಿ.ಗಲ್ಲಿಗಟ್ಟಿ ವಂದನಾರ್ಪಣೆ ನಿರ್ವಹಿಸಿದರು ಹಾಗೂ ಎಲ್ಲ ಶಿಕ್ಷಕವೃಂದ ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No comments:

Post a Comment